
2nd April 2025
ಬೀದರ. ಏ. 01 :- ಬೀದರ್ ತಾಲ್ಲೂಕಿನ ಸುಕ್ಷೇತ್ರ ಬಾವಗಿ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ಶೀ ಗುರು ಭದ್ರೇಶ್ವರನ ಜಾತ್ರಾ ಮಹೋತ್ಸವದ ಪ್ರಯುಕ್ತ ರವಿವಾರ ಭಿತ್ತಿ ಪತ್ರ ಬಿಡುಗಡೆಮಾಡಲಾಯಿತು .
ಗುರು ಭದ್ರೇಶ್ವರ ಸಂಸ್ಥಾನದ ವೇದಮೂರ್ತಿ ಶಾಂತಕುಮಾರ ಸ್ವಾಮಿ ಯವರು ಮಾತನಾಡಿ ದಿನಾಂಕ 3/4/2025 ರಂದು 11ದಿನಗಳ ಕಾಲ ಗುರು ಭದ್ರೇಶ್ವರ ಚರಿತ್ರೆ ಪುರಾಣ ಕಾರ್ಯಕ್ರಮವು ನಡೆಯಲಿದೆ.
ಎಪ್ರೀಲ್ 13,14,15,ರಂದು ಜಾತ್ರಾ ಮಹೋತ್ಸವದ ನಡೆಯಲಿದ್ದು ಜಾತ್ರಾ ಮಹೋತ್ಸವದ ಕಾರ್ಯಕ್ರಮ ಈ ಕೆಳಗಿನಂತಿದೆ.
ದಿನಾಂಕ 13ರಂದು ಜಾತ್ರಾ ಮಹೋತ್ಸವ ಉದ್ಘಾಟನೆ ಯಾಗಲಿದ್ದು 14 ರಂದು ಪಲ್ಲಕ್ಕಿ ಹಾಗೂ ನಾಡಿನ ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ರಸಮಂಜರಿ, ಜರುಗಲಿದೆ 15 ರಂದು ಗುರು ಭದ್ರೇಶ್ವರ ಮಹಾ ರಥೋತ್ಸವ ಜರುಗಲಿದೆ. ಅದಕ್ಕಾಗಿ ಸಕಲ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಯಾಗಿಸಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಭದ್ರೇಶ್ವರ ಸಂಸ್ಥಾನದ ವೇದಮೂರ್ತಿ ಭದ್ರಯ್ಯ ಸ್ವಾಮಿ, ಮುಖಂಡರಾದ ಚನ್ನಮಲ್ಲಪ್ಪ ಹಜ್ಜರಗಿ, ರೇವಣಪ್ಪ ಭದ್ರಣ್ಣ, ನಾಗಶೆಟ್ಟಿ ಅಳ್ಳಿ, ಕಾಶಪ್ಪಾ ಪಕ್ಕಾ, ಲೋಕೇಶ ಕನಶೆಟ್ಟಿ, ಶಿವಕುಮಾರ ರೇಶಟ್ಟಿ, ರಾಜಕುಮಾರ ಪಾಟೀಲ, ಬಸವರಾಜ ಖೌದಿ, ಪ್ರಭು ಹಜ್ಜರಗಿ, ಮಾರುತಿ ಹೂಗಾರ, ಶರಣಪ್ಪಾ ಮುದ್ದ ಸುನೀಲ ಚಿದ್ರಿ ನಾಗೇಶ್ ಕೊಳಾರ, ಭದ್ರಪ್ಪ ಖೌದಿ, ಶಿವಕುಮಾರ ಸಂಗಶೆಟಿ, ಘಾಳೆಪ್ಪಾ ಬೊಮ್ಮಣಿ ಅವಿನಾಶ ಭಾಲ್ಕೆ, ಉಪಸ್ಥಿತರಿದ್ದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ